ನನ್ನಾಸೆಯ ಹೂವೇ - ಹೊಂಬಾಳೆ ಹೊಂಬಾಳೆ

Posted on April 27th, 2006 in ಹಂಸ್, ಹಾಡು ಹಬ್ಬ by sritri
ನನ್ನಾಸೆಯ ಹೂವೇ - ೧೯೯೦ 
ಸಂಗೀತ ಮತು ಸಾಹಿತ್ಯ: ಹಂಸಲೇಖ
ಗಾಯಕ: ರಾಜೇಶ್ ಕೃಷ್ಣನ್  
 
ಹಾಡು ಕೇಳಿ   

ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ
ನನ್ನಾಸೆಯ ಹೂವೇ ಕೇಳೇ
ನೀನಿದ್ದರೆ ಬಾಳೆ ಹೊಂಬಾಳೆ ||ಪ||

ಕಡಲಂಥ ಕಣ್ಣೋಳೆ
ಮುಗಿಲಂಥ ಮನದೋಳೆ
ನಿನ್ನಂಥ ಚೆಲುವೆ ಯಾರೆ?
ಹೃದಯಕ್ಕೆ ಬೆಳದಿಂಗಳ ತಾರೆ
ಸೌಂದರ್ಯ ಲಹರೀಲಿ
ಮಿಂದೆದ್ದು ಬಂದೋಳೆ
ಪ್ರೀತಿಯ ಪರಮಾನ್ನ ಉಂಡೆದ್ದು ಬಂದೋಳೆ
ನಿನಗಿಂತ ಗೆಳತಿ ಯಾರೆ?
ಪ್ರೀತಿಯ ಗೆಳೆತನ ತಾರೆ ||೧||

ಕಂಗಳ ಬಾಗಿಲು ಹೃದಯಕ್ಕೆ ಕಾವಲು
ಕಾವಲು ಮುರಿದ ನೀರೆ
ಕಣ್ಣಿಂದ ಕರುಣೆಯ ತೋರೆ
ಮನಸೊಂದು ಮಗುವಂತೆ
ಬಯಸಿದ್ದು ಬಿಡದಂತೆ
ಅಳಿಸಬೇಡ ಮಗುವ ಬಾರೆ
ಪ್ರೀತಿಯ ಉಡುಗೊರೆ ತಾರೆ||೨||

***

 

 

ಪ್ರತಾಪ್ - ಪ್ರೇಮ ಬರಹ ಕೋಟಿ ತರಹ

Posted on April 27th, 2006 in ಹಂಸ್, ಹಾಡು ಹಬ್ಬ by sritri

ಪ್ರತಾಪ್ - ೧೯೯೦
ಸಾಹಿತ್ಯ, ಸಂಗೀತ - ಹಂಸಲೇಖ
ಗಾಯಕರು - ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್

ಪ್ರೇಮ ಬರಹ …. ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು

ಪ್ರೇಮಾ…. ದಿನ ನೂತನವೀ ಪ್ರೇಮ
ಪ್ರತಿ ಜನುಮದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮ
ದಿನ ನಗುವುದೇ ಪ್ರೇಮ ||

ಯಾರೋ ನೀನ್ಯಾರೊ
ಯಾರೋ ನಾನ್ಯಾರೋ
ನಾವೀಗ ಸೇರಿರಲು
ಪ್ರೇಮದ ಸೆಳೆತವೇ ಕಾರಣವು |
ಸಾವೇ ಹೂವಾಗಿ
ನೋವೇ ಜೇನಾಗಿ
ನಾವೀಗ ಸವಿದಿರಲು
ಪ್ರೇಮದ ಸತ್ಯವೇ ಪ್ರೇರಣವು|
ಪ್ರೀತಿ ಮಾಡುವವರು
ಲೋಕದಲಿ ಪುಣ್ಯ ಮಾಡಿದವರು
ಪ್ರೇಮಾ… ಬಲು ಸುಖಮಯವೀ ಪ್ರೇಮ
ಈ ಭೂಮಿಯಲಿ….ಈ ಬಾಳಿನಲಿ
ನೆನಪಿಡುವುದೇ ಪ್ರೇಮ
ಹೆಸರುಳಿವುದೇ ಪ್ರೇಮ ||೧||

ನಾನೇ ನೀನಾದೆ ನೀನೇ ನಾನಾದೆ
ಬೇರಾಗೋ ಸುಳ್ಳುಗಳ
ಪ್ರೇಮದ ಬಾಣವು ಓಡಿಸಿದೆ|
ಆಸೆ ಮುಗಿಲಾಯ್ತು
ರಾತ್ರಿ ಹಗಲಾಯ್ತು
ದೂರಾಗೋ ಚಿಂತೆಗಳ
ಪ್ರೇಮದ ಹಾಸಿಗೆ ಮರೆಸುತಿದೆ|
ಪ್ರೀತಿ ಮಾಡಿದವರು
ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ… ಬಲು ನಶೆಮಯವೀ ಪ್ರೇಮ
ಪ್ರತಿ ಘಳಿಗೆಯಲೂ
ಕಣ ಕಣಗಳಲೂ
ಫಲ ಕೊಡುವುದೇ ಪ್ರೇಮ
ಸುಖ ಕೊಡುವುದೇ ಪ್ರೇಮ||೨||

_________________________

ಮಣ್ಣಿನ ದೋಣಿ - ಮಳೆ ಮಳೆ

Posted on April 27th, 2006 in ಹಂಸ್, ಹಾಡು ಹಬ್ಬ by sritri

ಚಿತ್ರ - ಮಣ್ಣಿನದೋಣಿ - ೧೯೯೩
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
ಗಾಯಕರು - ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ

ಹಾಡು ಕೇಳಿ

ಮಳೆ ಮಳೆ ಮಳೆ ಮಳೆ
ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ
ಕನಸಿನ ಸುರಿಮಳೆ

ಮನ ಹರಯದ ನದಿಯಾಗಿದೆ
ತನು ಬದುಕಿನ ಕಡಲಾಗಿದೆ

ಮೊದಲನೆ ನೋಟ ಮದನ ಮಳೆ
ಮೊದಲನೆ ಸ್ವರ್ಶ ರತಿಯ ಮಳೆ
ಮೊದಲನೆ ಮಾತು ಕವನ ಮಳೆ
ಮೊದಲನೆ ನಗುವು ಹುಣ್ಣಿಮೆ ಮಳೆ

ತುಂತುರು ತುಂತುರು ಮಳೆಯಲಿ
ಮೊದಲನೆ ಮಿಲನ
ಮಳೆಯ ಮಣ್ಣಿನ ಮದುವೆಲಿ
ಬೆರೆತವು ನಯನ

ತೊಡಿಸಿದವು ಗುಡುಗುಗಳು
ಬೆಳಗಿದವು ಮಿಂಚುಗಳು
ಮಳೆಯ ಹಾಡ ಮರೆಯಬಲ್ಲವೇ?||೧||

ಆಲಿಂಗನಕೆ ಭರಣಿ ಮಳೆ
ಸಿಹಿ ಚುಂಬನಕೆ ಸ್ವಾತಿ ಮಳೆ
ಒಸಗೆಯ ಹಗಲು ಹಸ್ತ ಮಳೆ
ಬೆಸುಗೆಯ ರಾತ್ರಿ ಚಿತ್ತ ಮಳೆ

ಮಧುರ ಮಧುರ ಮೈತ್ರಿಯ
ಮಳೆಯಲಿ ಶಯನ
ಒಡಲ ಒಳಗೆ ಉರಿಯುವ
ಬಯಕೆಯ ಶಮನ

ಮುಂಗಾರು ಹಿಂಗಾರು
ಮಳೆ ನೀರೇ ಪನ್ನೀರು
ಮಳೆಯ ಹಾಡ ಮರೆಯಬಲ್ಲವೇ? ||೨||

*           *           * 

Next Page »