ನಿಮ್ಮೊಡನಿದ್ದೂ ನಿಮ್ಮಂತಾಗದೆ - ಕೆ. ಎಸ್. ನಿಸಾರ್ ಅಹಮದ್

Posted on August 29th, 2006 in ಕವಿ-ಕಾವ್ಯ by sritri

ಕವನ -  ನಿಮ್ಮೊಡನಿದ್ದೂ ನಿಮ್ಮಂತಾಗದೆ
ಕವಿ -  ಕೆ. ಎಸ್. ನಿಸಾರ್ ಅಹಮದ್

ನಿಮ್ಮೊಡನ್ದಿದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದ್ದಿದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ಒಳಗೊಳಗೇ ಬೇರು ಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತ್ಲಿಲದಂತೆ ನಟಿಸಿ
ಚಕಾರವೆತ್ತದ ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬ್ದಿದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.

*             *             *

(ಸಂಜೆ ಐದರ ಮಳೆ ಸಂಕಲನದಿಂದ - ೧೯೭೦)

*              *              *

ಶೃಂಗಾರ ಕಾವ್ಯ - ಶೃಂಗಾರ ಕಾವ್ಯ ಬರೆದನು

Posted on August 23rd, 2006 in ಹಂಸ್, ಹಾಡು ಹಬ್ಬ by sritri

ಚಿತ್ರ - ಶೃಂಗಾರ ಕಾವ್ಯ - ೧೯೯೩
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
ಗಾಯಕ - ಎಲ್.ಎನ್. ಶಾಸ್ತ್ರಿ

ಹಾಡು ಕೇಳಿ

ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ
ತಂತಿ ಕಡಿದ
ಇನ್ನು ಮೌನ ಗಾನವೇ |

ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು ಸುರಿದ
ಕಣ್ಣೇ ತೆಗೆದ
ಇನ್ನು ಶೂನ್ಯ ಗಾನವೇ ||೧||

ವರವಾಗಿ ಒಲವ ತಂದನು
ಮರವಾಗೋ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖ ಕಾಣುವಾಗ ಮುನಿದನು
ಜಯವ ಕಡೆದ
ಭಯವ ಸುರಿದ
ಇನ್ನು ಶೋಕ ಗಾನವೇ ||೨||

***

ಆಟೋಗ್ರಾಫ್ ಪ್ಲೀಸ್ - ಹೃದಯ ಮಾತಾಡುವ ವೇಳೆಯಲ್ಲಿ

Posted on August 20th, 2006 in ಹಾಡು ಹಬ್ಬ by sritri
ಚಿತ್ರ - ಆಟೋಗ್ರಾಫ್ ಪ್ಲೀಸ್ -೨೦೦೫ 
ಗಾಯಕರು : ರಾಜೇಶ್,ನಂದಿತಾ
ಸಾಹಿತ್ಯ : ಪ್ರಕಾಶ್
ಸಂಗೀತ : ಅರ್ಜುನ್

ಹಾಡು ಕೇಳಿ

ಹೃದಯ ಮಾತಾಡುವ ವೇಳೆಯಲ್ಲಿ
ಮಾತು ಬರದಾಗಿದೆ ತುಟಿಗಳಲ್ಲಿ
ಮಾತು ನಿಜವಾಗದೆ
ಮೂಕವಾಯ್ತು ಪ್ರೀತಿ ಇಲ್ಲಿ
ಹೃದಯ ಮಾತಾಡುವ ವೇಳೆಯಲ್ಲಿ

ಎಂದೋ ಕಂಡಾ ಆ ಕನಸು
ಇನ್ನು ಬರೀ ಕನಸು
ಇದೇ ಕನಸಿಗಾಗಿ
ಇದೆ ಎರಡು ಮನಸು
ಪ್ರತಿ ಕ್ಷಣ ನೆನಪಿರಬೇಕು
ಪ್ರತಿ ದಿನ ಜೊತೆಗಿರಬೇಕು
ಹೆಜ್ಜೆ ಹೆಜ್ಜೆ ಸೇರಲೇ ಬೇಕು ಉಸಿರಾಗಿ
ಹೃದಯ ಮಾತಾಡುವ ವೇಳೆಯಲ್ಲಿ
ಮಾತು ಬರದಾಗಿದೆ |

ಪ್ರೀತಿ ಒಂದು ಸಂಗೀತ
ರಾಗ ತಾಳ ನೂರು
ಗೊತ್ತೇ ಇರದ ಲೋಕದಲಿ
ಕೇಳೋರಿಲ್ಲಿ ಯಾರು?

ಕಾಲ ಒಂದು ಕನ್ನಡಿಯಂತೆ
ನಾನು ನೀನು ಬಿಂಬಗಳಂತೆ
ಪ್ರತಿ ಬಿಂಬದಲ್ಲೂ ಒಂದೇ ಪ್ರತಿಬಿಂಬ

ಹೃದಯ ಮಾತಾಡುವ ವೇಳೆಯಲ್ಲಿ
ಮಾತು ಬರದಾಗಿದೆ ತುಟಿಗಳಲ್ಲಿ
ಮಾತು ನಿಜವಾಗದೆ
ಮೂಕವಾಯ್ತು ಪ್ರೀತಿ ಇಲ್ಲಿ
ಹೃದಯ ಮಾತಾಡುವ ವೇಳೆಯಲ್ಲಿ|

Next Page »