AK-47 - ಕಡಲೋ ಕಣ್ಕಡಲೋ

Posted on November 27th, 2006 in ಹಂಸ್, ಹಾಡು ಹಬ್ಬ by sritri

ಚಿತ್ರ - AK-47 - (1999)
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
ಗಾಯಕರು - ಚಿತ್ರ,ಹರಿಹರನ್

ಹಾಡು ಕೇಳಿ 

ಕಡಲೋ ಕಡಲೋ ಕಣ್ ಕಡಲೋ
ಮುಗಿಲೋ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ
ನೀ ನನ್ನ ಬದುಕಿಸು|

ನುಡಿಮುತ್ತುದುರಿಸಬೇಡ
ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು|

||ಕಡಲೋ ಕಡಲೋ||

ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು ಹೊರಗೆ ಸಿಬಿರು
ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ
ಯಾಕೀ ಪ್ರೀತಿಗೆ

ನಾನೂ ಹೆಣ್ಣೇ ಕಾಣದೇ?
ನನಗೂ ಒಂದು ಮನಸಿದೆ
ತುಟಿಗಳು ಎರಡು ಭಯದಲಿ ನಿಂತು
ಬಿಗಿಯಿತು ಬೀಗಗಳ|

||ನುಡಿಮುತ್ತುದುರಿಸಬೇಡ||

ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನಿನ್ನದು
ಎಷ್ಟೇ ಜನುಮ ಆದರೂ ಪಡೆಯೋ ಶಪಥ ನನ್ನದು

ಕಡಲಿಗೆ ಎರಡೂ ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ
ನನ್ನೀ ಹಂಬಲಕೆ

ಗೆಳತಿಯರನು ಕೇಳಬೇಡ
ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೇ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು|

||ಕಡಲೋ ಕಡಲೋ||

*   *   *    *  * *  *

Happy Thanksgiving day!

Posted on November 22nd, 2006 in ಅನಿಸಿದ್ದು by sritri

Happy Thanksgiving weekend yahoo2 !! ಇನ್ನೊಂದು ೩-೪ ದಿನ ಅಮೆರಿಕದಿಂದ ಹೊರಡುವ ಬ್ಲಾಗ್‍ಗಳಿಗೆಲ್ಲಾ ರಜ ಅನ್ನಿಸತ್ತೆ. yahoo2 ಯಾಕೆಂದರೆ, ಈ ಸಮಯದಲ್ಲಿ ಮನೆಯಲ್ಲಿ ಇರೋರು ಕಡಿಮೆ. ಅಲ್ಲಿ,ಇಲ್ಲಿ, ಗೆಳೆಯರ ಮನೆಗೆ, ಹೊಸ ಹೊಸ ಜಾಗಗಳನ್ನು ನೋಡಲು ಹೋಗುವವರೇ ಹೆಚ್ಚು. ನೀವೆಲ್ಲ ಏನೇನು ಪ್ಲಾನ್ ಮಾಡಿದೀರಿ? ಎಲ್ಲಿಗೆ ಹೋಗ್ತಾ ಇದೀರಿ?

ನಾವೇನು ಹಬ್ಬ ಮಾಡಿ, ಟರ್ಕಿ ತಿನ್ನೋದಿಲ್ಲವಾದರೂ,  ಅಮೆರಿಕಕ್ಕೆ ಬಂದಾಗಿನಿಂದ, ನಾವು ತಪ್ಪದೆ ನಡೆಸಿಕೊಂಡು ಬಂದಿರುವ ಸಂಪ್ರದಾಯ ಒಂದಿದೆ. ಅದು ಏನೆಂದರೆ Black friday shopping.   ಕೊರೆವ ಚಳಿಯಲ್ಲಿಯೂ best buy, fry’s,circuit city, compUSA.. ಮುಂತಾದ ಅಂಗಡಿಗಳ ಮುಂದೆ  ಜನ ಕಾಯುತ್ತಾ ನಿಂತಿರೋದು ನೋಡಕ್ಕೆ ನನಗೆ ತುಂಬಾ ಇಷ್ಟ.  ಹೋದ ವರ್ಷ ಅಂತೂ ಹಿಂದಿನ ದಿನ ತುಂಬಾ ಸ್ನೋ ಆಗಿತ್ತು. ಆ ಕೆಟ್ಟ ಥಂಡಿಗೂ ಹೆದರದೆ, ನಡುರಾತ್ರಿಯಿಂದಲೇ ದಪ್ಪ ಹೊದಿಕೆ ಹೊದ್ದುಕೊಂಡು, ಕೆಲವು ಜನರು ಅಂಗಡಿಗಳ ಮುಂದೆ ಮಲಗಿ ಬಿಟ್ಟಿದ್ದರು. ಅವರನ್ನು ನೋಡಿ ಈ ಜನರದ್ದೇನು ಎಮ್ಮೆ ಚರ್ಮನೋ? ಆನೆ ಚರ್ಮನೋ! ಎಂದು ಆಶ್ಚರ್ಯ ಆಗಿತ್ತು.

ಇಲ್ಲಿಗೆ ಬಂದ ಹೊಸದರಲ್ಲಿ ಮನೆ ಖಾಲಿ ಇತ್ತು. ಮನೆಗೆ ಅದು ಬೇಕು , ಇದು ಬೇಕು ಎಂದು ಶಾಪಿಂಗ್ ಮಾಡುವುದು ಅನಿವಾರ್ಯವಾಗಿತ್ತು. ಈಗ ಮನೆಯಲ್ಲಿ ಇಲ್ಲದ ವಸ್ತುವೇ ಇಲ್ಲ. ಹೊಸದಾಗಿ ಕೊಳ್ಳಲು ಏನೇನೂ ಉಳಿದಿಲ್ಲ.  ಆದರೂ ಬೆಳಗಿನ ಜಾವದ ಈ ಶಾಪಿಂಗ್ ಮಜ ತಪ್ಪಿಸಿಕೊಳ್ಳುವ ಮನಸ್ಸಿಲ್ಲ!! 

ಅಂಗಡಿಯ ಬಾಗಿಲು ತೆಗೆಯುವ ಕ್ಷಣವನ್ನೇ ಕಾಯುತ್ತಾ ,ಕಾತುರದಿಂದ ನಿಂತಿರುವ ಜನರನ್ನು ನೋಡಿದರೆ ನನಗೆ ಏನು ನೆನಪಾಗತ್ತೆ ಗೊತ್ತಾ?

ಗೆಸ್ ಮಾಡಿ ನೋಡೋಣ….

“ಸುಮುಹುರ್ತಾ ಸಾವಧಾನ…” ಎಂಬ ಪುರೋಹಿತರ ಮಂತ್ರಗಳ ನಡುವೆ, ಅಂತರಪಟ ಸರಿಯುವುದನ್ನೇ ನಿರೀಕ್ಷಿಸುತ್ತಾ ನಿಂತಿರುವ ವಧೂವರರು! yahoo2 yahoo2

***************         *************

ಹೆಸರುಬೇಳೆಗೆ ಈ ಹೆಸರೇಕೆ?

Posted on November 20th, 2006 in ಅನಿಸಿದ್ದು by sritri

ಮೇಲೇರಿದ್ದ ಬೇಳೆಗಳ ಬೆಲೆ ಕೆಳಗಿಳಿಯುತ್ತಾ  ಇದೆ. ಈ ಬಾರಿ ಸಮಸ್ಯೆ ಬಿಸಿಬೇಳೆ ಬಾತಿಗೆ ಬೇಕಾದ ತೊಗರಿಬೇಳೆಯದಲ್ಲ. ಹೆಸರುಬೇಳೆಯದು.  

ಸುಮ್ಮನೆ ಯೋಚಿಸುತ್ತಿದ್ದೆ .. ಬೇರೆ ಕೆಲಸವಿಲ್ಲದೆ ಅಲ್ಲ yahoo2  ಹೆಸರುಬೇಳೆಯ ಹೆಸರು ಮೊದಲು ಹಸಿರುಬೇಳೆ ಎಂದು ಇದ್ದಿರಬಹುದಲ್ಲವೇ? ಏಕೆಂದರೆ ಹೆಸರುಕಾಳಿನ ಬಣ್ಣ ಹಸಿರು.  englishನಲ್ಲಿಯೂ green gram ಅಂದರೆ ಹೆಸರುಬೇಳೆ ತಾನೇ? ನಮ್ಮ ತಮಿಳು ಮಿತ್ರರು ಹೆಸರುಬೇಳೆಗೆ “ಪಚ್ಚ ಪರಪು” ,”ಪಯರ್ ಪರಪು” ಎಂದು ಕರೆಯುವುದನ್ನು ಕೇಳಿದ್ದೇನೆ. ತೆಲುಗು,ಮಲೆಯಾಳಂನಲ್ಲಿ , ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ? ಅಲ್ಲೂ ಏನಾದರೂ “ಹಸಿರು” ಸಂಬಂಧಿ ಹೆಸರುಗಳಿವೆಯೇ ಎಂಬ ಕುತೂಹಲ ಅಷ್ಟೇ…

“ಇಗೋ ಕನ್ನಡ” ವೆಂಕಟಸುಬ್ಬಯ್ಯನವರು ಈ ಬಗ್ಗೆ ಎಲ್ಲಾದರೂ ಹೇಳಿರಲೇಬೇಕು. ಗೊತ್ತಿದ್ದರೆ ತಿಳಿಸಿ, ಗೊತ್ತಿರದಿದ್ದರೆ ಬೇಡ ಬಿಡಿ. ತಲೆ ಕೆಡಿಸಿಕೊಳ್ಳಲು ಇದೇನು ತಲೆ ಹೋಗುವ ಸಮಸ್ಯೆ ಅಲ್ಲ. ಹೆಸರುಬೇಳೆ ಹೆಸರು ಕಟ್ಟಿಕೊಂಡು ಏನಾಗಬೇಕಿದೆ? ಹೆಸರುಬೇಳೆ ಸಿಕ್ಕಿದರೆ ಸಾಕು, ಹುಗ್ಗಿಗೆ …ಬರಲಿರುವ ಸಂಕ್ರಾಂತಿಗೆ.. ಅಲ್ವಾ? yahoo2

**********  ******* ********

Next Page »