ಮೌರಜಮೋದೆ - ಡಿವಿಜಿ
ಕವಿ - ಡಿವಿಜಿ -ಅಂತಃಪುರ ಗೀತೆಗಳು
ಗಾಯಕಿ: ರತ್ನಮಾಲಾ ಪ್ರಕಾಶ್
ಏನೀ ಮಹಾನಂದವೇ - ಓ ಭಾಮಿನೀ |
ಏನೀ ಸಂಭ್ರಮದಂದವೇ - ಬಲ್ಚಂದವೇ ||ಪ||
ಏನೀ ನೃತ್ತಾಮೋದ - ಏನೀ ಮೌರಜನಾದ |
ಏನೀ ಜೀವೋನ್ಮಾದ-ವೇನೀ ವಿನೋದ || ಅ.ಪ||
ಢಕ್ಕೆಯ ಶಿರಕೆತ್ತಿ - ತಾಳಗೋಲಿಂ ತಟ್ಟಿ |
ತಕ್ಕಿಟ ಧಿಮಿಕಿಟ - ತಕಝಣುರೆನಿಸಿ ||
ಕುಕ್ಕುತೆ ಚರಣವ - ಕುಲುಕುತೆ ಕಾಯವ |
ಸೊಕ್ಕಿದ ಕುಣಿತವ - ಕುಣಿವೆ ನೀನೆಲೆ ಬಾಲೆ ||೧||
ಆರೋ ನಿನ್ನಯ ಹೃದಾ-ಗಾರದಿ ನರ್ತಿಸಿ|
ಮಾರ ಶೂರತೆಯ ಪ್ರ-ಚಾರಿಸುತಿರ್ಪನ್ ||
ಸ್ಮೇರವದನ ನಮ್ಮ - ಚೆನ್ನಕೇಶವರಾಯ- |
ನೋರೆಗಣ್ಣಿಂ ಸನ್ನೆ - ತೋರುತಲಿಹನೇನೆ ||೨||
***
6 Comments