ರಾಗದಲ್ಲಿ ಕನ್ನಡಕ್ಕೂ ಜಾಗ

Posted on November 30th, 2007 in ಅನಿಸಿದ್ದು by sritri

ಇಷ್ಟು ವರ್ಷ ಕನ್ನಡ ಬಿಟ್ಟು ಹಿಂದಿಯ ಜೊತೆಗೆ ದಕ್ಷಿಣದ ಉಳಿದೆಲ್ಲಾ ಭಾಷೆಗಳ ಹಾಡುಗಳಿಗೂ ಆತಿಥ್ಯ ನೀಡುತ್ತಿದ್ದ ರಾಗ ಸಂಗೀತ ತಾಣದಲ್ಲಿ ಕೊನೆಗೂ ಕನ್ನಡಕ್ಕೆ ಜಾಗ ಸಿಕ್ಕಿದೆ. ಇದು ಯಾವಾಗಿನಿಂದ ಇದೆಯೋ ಗೊತ್ತಿಲ್ಲ. ನಾನು ನೋಡಿದ್ದು ಇಂದೇ. ತುಂಬಾ ಸಂತೋಷವಾಗುತ್ತಿದೆ. ಕನ್ನಡ ಹಾಡುಗಳಿಗೆ ಉದ್ಭವ, ಕನ್ನಡ ಆಡಿಯೋ, ಮ್ಯುಸಿಕ್ ಇಂಡಿಯಾ ಆಶ್ರಯಿಸುತ್ತಿದ್ದವರಿಗೆ ಈಗ ಕನ್ನಡ ಕೇಳಿ ನಲಿಯಲು ಹೊಸದೊಂದು ತಾಣ ದೊರಕಿದಂತಾಯಿತು.

ಅಂತರ್ಜಾಲದಲ್ಲಿ ಕನ್ನಡ ಪ್ರಕಾಶಿಸುತ್ತಿದೆ! yahoo2

“ಖೋ” ಕಾದಂಬರಿ

Posted on November 19th, 2007 in ಅನಿಸಿದ್ದು by sritri

ಅಮೆರಿಕಾದ ಇಲಿನಾಯ್ ಕನ್ನಡ ಕೂಟ ‘ವಿದ್ಯಾರಣ್ಯ’ ಎರಡು ತಿಂಗಳಿಗೊಮ್ಮೆ ಹೊರ ತರುತ್ತಿರುವ “ಡಿಂಡಿಮ” ಪತ್ರಿಕೆಯಲ್ಲಿಯೂ ‘ಖೋ ಕಾದಂಬರಿ ಬರೆಯುವ ಪ್ರಯತ್ನ ಈಗ ನಡೆದಿದೆ. ವಿದ್ಯಾರಣ್ಯದ ಕನ್ನಡ ಕೂಟದ ಸದಸ್ಯರಾದ ಪ್ರಕಾಶ್ ಹೇಮಾವತಿಯವರು ಮೊದಲಿಗೆ ’ಬಲೆ’ ಎಂಬ ಹೆಸರಿನಲ್ಲಿ ಕಥೆಯನ್ನು ಪ್ರಾರಂಭಿಸಿದರು. ಅದನ್ನು ಮುಂದುವರೆಸಲು ಕೂಟದ ಇತರ ಸದಸ್ಯರಿಗೆ ಆಹ್ವಾನ ಕೊಡಲಾಯಿತು. ಈಗಾಗಲೇ ಐದು ಭಾಗ ಮುಂದುವರೆದಿದೆ. ಮೂರನೆಯ ಭಾಗ - “ಮನಸಿದು ಗೊಂದಲದ ಗೂಡು” ನಾನು ಮುಂದುವರೆಸಿದ್ದೇನೆ. ಮುಂದಿನ ಡಿಸೆಂಬರ್ ಸಂಚಿಕೆಯಲ್ಲಿ ಕೊನೆಯ ಕಥೆಗಾರರು ಕಥೆಯನ್ನು ಮುಕ್ತಾಯಗೊಳಿಸಲಿದ್ದಾರೆ.

ನಮ್ಮ ವಿದ್ಯಾರಣ್ಣಿಗರು ಹೆಣೆದಿರುವ ’ಬಲೆ’ ಖೋ ಕಥೆಯನ್ನು ನೀವಿಲ್ಲಿ ಓದಬಹುದು.

ಬಲೆ - ೧

ಬಲೆ -೨ ಮತ್ತು ೩

ಬಲೆ -೪

‘ತುಳಸೀವನ’ದಲ್ಲಿ ಕಥೆ ಕಟ್ಟುವ ಆಟ ಪ್ರಾರಂಭವಾದಾಗ ಸುನಾಥ ಮತ್ತು ಇತರರು ನೀಡಿದ ಕೆಲವು ಅಮೂಲ್ಯ ಮಾಹಿತಿಗಳು ಹಲವು ಕಡೆ ಹಂಚಿಹೋಗಿದ್ದವು. ಅವುಗಳನ್ನು ಈ ಹೊಸ ಎಳೆಯಲ್ಲಿ ಒಂದುಗೂಡಿಸಲು ಪ್ರಯತ್ನಿಸಿದ್ದೇನೆ. ಈ ಬಗ್ಗೆ ನಿಮಗೆ ತಿಳಿದ ಮತ್ತಷ್ಟು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಿ.

ಕಥೆಯ ಕೊನೆಯ ಭಾಗ!

Posted on November 18th, 2007 in ಕಟ್ಟು ಕಥೆ by sritri

ಐದು ವರ್ಷಗಳ ಬಳಿಕ…………………….
ಓಹುರಾ ನ್ಯೂಝೀಲ್ಯಾಂಡಿನಲ್ಲಿರುವ ಒಂದು ಸಣ್ಣ ಊರು. ಅಲ್ಲಿಯೇ ಇರುವ ‘ಸಮೀಉಲ್ಲಾ ಕುರಿ ಫಾರ್ಮ್’ನಲ್ಲಿ ಕುಳಿತುಕೊಂಡು ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ. ಅವನ ಸೆಲ್ ಫೋನ್ ರಿಂಗಣಿಸಿತು. ಅತ್ತಲಿಂದ ಕವಿತಾಳ ಧ್ವನಿ ಕೇಳಿಸಿತು.
“ಭರತ್, ಬೇಗನೆ ಮನೆಗೆ ಹೋಗಿ ಸ್ಪೆಶಲ್ ಹಯಗ್ರೀವ ಹಾಗು ಬೋಂಡಾ ಸೂಪ್ ಮಾಡಿಡು. ರಾಜೀವ,ಧಾರಿಣಿ,ಪ್ರವಲ್ಲಿಕಾ ಹಾಗು ಸುಶಾಂತ ಅಮೇರಿಕಾದಿಂದ ಐದು ಗಂಟೆಗೆಲ್ಲಾ ಬಂದು ಬಿಡುತ್ತಾರೆ.”
“ಕವಿತಾ, ನೀನು ಸ್ಕೂಲಿನಿಂದ ಯಾವಾಗ ಬರುತ್ತಿ?”,ಭರತ ಕೇಳಿದ.
“ನಾನು New Plymouth ಏರ್ ಪೋರ್ಟಿಗೆ ಹೋಗಿ ಅವರನ್ನು ಕಾರಿನಲ್ಲಿ ಕರೆದುಕೊಂಡೇ ಬರ್ತೀನಿ. ನೀನು ಬರುವಾಗ Child Care Centreಗೆ ಹೋಗಿ ಕೇಶವನನ್ನೂ ಕರೆದುಕೊಂಡೇ ಬಾ”, ಕವಿತಾ ಹೇಳಿದಳು.
…………………………………………….
ಕವಿತಾಳ ಜೊತೆಗೆ ಅವಳ ಮನೆ “ಸರೋಜಾ ಸದನ” ತಲುಪಿದ ತಕ್ಷಣ, ಪ್ರವಲ್ಲಿಕಾ ಭರತನನ್ನು ಪ್ರೀತಿಯಿಂದ ಆಲಂಗಿಸಿ, “ಅಣ್ಣಾ, ನಿನಗೆ ಒಂದು ಉಡುಗೊರೆ; ಕಣ್ಣು ಮುಚ್ಚಿ, ಕೈ ಚಾಚು!” ಎಂದಳು.
ಭರತನ ಚಾಚಿದ ಕೈಗೆ, ಪ್ರವಲ್ಲಿಕಾ ಚಿನ್ನದ ಎಳೆಗಳ ಒಂದು ರಾಖೀ ಕಟ್ಟಿ,
“ಈಗ ಕಣ್ಣು ತೆರೆ” ಎಂದಳು.
“ಪ್ರವಲ್ಲಿಕಾ ಥ್ಯಾಂಕ್ಸ್; ಆದರೆ ನನಗೆ ಮುಂದಿನ ರಾಖೀ ಹಬ್ಬಕ್ಕೆ ಚಿನ್ನದ ರಾಖೀ ಬೇಡ;ಚಿನ್ನದಂತಹ ಸೊಸೆ ಬೇಕು…..ಗೊತ್ತಾಯ್ತೇನೋ, ಸೋಮಾರಿ ಸುಶಾಂತ್!”ಎಂದು ಭರತ ಸುಶಾಂತನನ್ನು ಗೇಲಿ ಮಾಡಿದ.
ಸುಶಾಂತ ನಗುತ್ತ,”ನಾನೂ ಅದನ್ನೇ ಹೇಳ್ತಾ ಇದ್ದೇನೆ. ಮೇಡಮ್ ನನ್ನ ಮಾತನ್ನೇ ಕೇಳೋದಿಲ್ಲ” ಎಂದು ಪ್ರವಲ್ಲಿಕಾಳನ್ನು ಛೇಡಿಸಿದ.
“ಸುಶಾಂತ, ನಿನ್ನ ಜವಾಬುದಾರಿ ಹಾರಿಸಿಕೊಳ್ಳಬೇಡ”,ಎಂದು ನಕ್ಕ ಪ್ರವಲ್ಲಿಕಾ, “OK, I promise to present your daughter-in-law for the next ಹಬ್ಬಾ!”,ಎಂದು ಕಣ್ಣರಳಿಸಿ ಕವಿತಾಳಿಗೆ ಹೇಳಿದಳು.
‘ಸರೋಜಾ ಸದನ’ ಹರುಷದ ನಗುವಿನಿಂದ ತುಂಬಿತು.

Next Page »