ಕುಂದಣದ ಹಸೆಗೆ ಚಂದದಲಿ ಬಾರೆ – Kundanada hasege Chandadali baare

ಕುಂದಣದ ಹಸೆಗೆ ಚಂದದಲಿ ಬಾರೆಚಂದದಲಿ ಬಾರೆ ಸಿಂಧು ಕುಮಾರಿ ||ಪಲ್ಲವಿ|| ಶೃಂಗಾರಮಯವಾದ ರಂಗ ಮಂಟಪದೊಳುಕಂಗೊಳಿಸು ಇಲ್ಲಿ ತಿಂಗಳ ಸೋದರಿ ||1|| ಕುಂದ ಕುಡ್ಮಲ ರದನೆ ಸಿಂಧೂರ ವದನೆಇಂದೂಧರಾದಿ ಸುರ ವೃಂದ ವಂದಿತ ಚರಣೆ || 2|| ಕಾಮನ ಜನನಿ ಕಾಮಿತ ದಾಯಿನಿಗೋಮಿನಿ ರುಕ್ಮಿಣಿ ಶಾಮಸುಂದರ ರಾಣಿ || 3||

ಮಧ್ವನಾಮ –  ಶ್ರೀಪಾದರಾಜ ವಿರಚಿತ

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲಗುಣ ಸದ್ಧಾಮ ಮಧ್ವನಾಮ || ಪ || ಆವ ಕಚ್ಛಪ ರೂಪದಿಂದಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿವಿಡಿದು ಹರಿಯ ಸುರರೈಯ್ದುವರು ಆ ವಾಯು ನಮ್ಮ ಕುಲಗುರುರಾಯನು || ೧ || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದಾ ಒಳ Read More

ಯಾವ ಜನ್ಮದ ಮೈತ್ರಿ – Yava Janmada maitri – kuvempu

ರಚನೆ – ಕುವೆಂಪುಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದುನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ ! ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ,ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,ಅದರಂತರಾಳದಲಿ ಗುಪ್ತಗಾಮಿನಿಯಾಗಿ; ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ? ಹಾದಿ ಸಾಗಿದರಾಯ್ತು ಬರುವುದೆಲ್ಲಾ Read More

ಹಕ್ಕಿಯ ಹಾಡಿಗೆ – Hakkiya hadige taledooguva – ಕೆ. ಎಸ್. ನರಸಿಂಹ ಸ್ವಾಮಿ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ. ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ. ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ. ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.ನಾಳೆಯ ಬದುಕಿನ ಇರುಳಿನ Read More

ಬಂದಿದೆ ದೂರು ಬರಿದೆ ಪಾಂಡವರಿಗೆ- Bandide dooru – Kanakadaasaru

ರಚನೆ : ಕನಕದಾಸರು ಬಂದಿದೆ ದೂರು ಬರಿದೆ ಪಾಂಡವರಿಗೆಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ|| ಮುನ್ನಿನ ವೈರದಿ ಕಡುಸ್ನೇಹವ ಮಾಡಿಉನ್ನಂತಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವನು ಕೊಂದಘನ್ನಘಾತುಕ ಶಕುನಿಯೋ? ಪಾಂಡವರೋ? ||೧|| ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆವದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||2|| ಮಗನ ನೆವದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಿಂದಜಗವರಿಯಲು ಕುರುವಂಶಕೆ Read More